ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
-ಜೇಡರ ದಾಸಿಮಯ್ಯ
ODalugOMDava hasiva; ODalugOMDava husiva ODalugOMDavanEMdu nInEnna jaridOmmE nuDiyadira! nInEnnaMtE OmmE ODalugOMDu noDa! rAmanAtha.
-jeDara dAsimayya
This satirical poem by a Lingayat saint-poet presents the devotee's anguished plea to the Lord:
Yes, oh, Lord, this body entails hunger. It entails a weakness for stretching the truth. So scorn me not. Take up a body and see for Yourself! (You are the pure spirit and thus unable to know the failings of one in flesh and blood!)
I found this plaque nailed to a wooden post in the heavenly lung space called Lalbagh!
I consulted also my Kavi friends and here are their responses. See the confluence of thought and word!
ಕವಿಸಹೃದಯರ ವ್ಯಾಖ್ಯಾನ |
ಶ್ರೀನಾಥ ನಾರಾಯಣ | ವಾಣೀ ಸುರೇಶ್ | ತಾರಾ ಮೂರ್ತಿ |
ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ ನಡುವಣ ಇಬ್ಬಗೆಯ ತೊಳಲಾಟವಾಗಲಿ ಜಡರೂಪಿಯಾದ ದೇವರಿಗಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. ನಿಂದಾಸ್ತುತಿ. ಓ ರಾಮನಾಥ (ಜೇಡರ ದಾಸಿಮಯ್ಯನ ದೇವರು), ನೀನು ಜಡರೂಪಿ ದೇವ. ನಿನಗೆ ನನ್ನ ಕಷ್ಟವೆಲ್ಲಿ ತಿಳಿಯಬೇಕು. ಒಡಲು / ದೇಹ ಎಂದರೆ ಈ ಭೂಮಿಯ ಮೇಲೆ ದೇಹವನ್ನು ಜೀವರೂಪವನ್ನು ಹೊಂದಿದವನಿಗೆ ಅನೇಕ ಹಸಿವೆಗಳಾಗುತ್ತವೆ. ಇಂತಹ ಜೀವರೂಪಿ ಸಂಸಾರ ಕಟ್ಟಿ ಕೊಂಡವನು. ಈ ಒಡಲುಕೊಂಡವನು ಸಂಸಾರ ತೂಗಿಸಲು ಹುಸಿಯನ್ನು ಸುಳ್ಳನ್ನು ಹೇಳುತ್ತಾನೆ. ನೀನು ಎನ್ನನ್ನು ಹೀಗೆ ಮಾಡುತ್ತೇನೆಂದು ಜರಿದು ಬೈದು ಬೆದರಿಸಿ ನುಡಿಯಬೇಡ.
ಓ ದೇವ, ನೀನೂ ನನ್ನಂತೆ ಒಡಲುಗೊಂಡು ಈ ಭೂಮಿಯಲ್ಲಿ ಮಾನವನಾಗಿ ಜನ್ಮ ತಳೆದು ನೋಡ. ನನ್ನ ಬವಣೆ ನಿನಗೂ ತಿಳಿಯುತ್ತದೆ | ಇಲ್ಲಿ "ಒಡಲು" ಅನ್ನೋದನ್ನ "ಶರೀರ" ಅಂತ ಅರ್ಥೈಸಿ "ಒಡಲುಗೊಂಡವ" ಅಂದರೆ ಒಡಲನ್ನು ಹೊಂದಿದವನು ಅಂದರೆ (ನಮ್ಮ ಕೃಷ್ಣ ಹೇಳುವಂತೆ 🙂) "ಶರೀರಿ" ಅಥವಾ "ಮಾನವ" ಅಂತಂದ್ಕೋಬೇಕಾಗತ್ತೆ. ಈ ವಚನದಲ್ಲಿ ದಾಸಿಮಯ್ಯ, ಅವನ ಆರಾಧ್ಯ ದೈವವಾದ ರಾಮನಾಥನಿಗೇ ಎಷ್ಟು ಚೆನ್ನಾಗಿ challenge ಮಾಡ್ತಿದಾನೆ ನೋಡಿ. ಅವನು (ಬಹುಶಃ ಇದುವರೆಗೂ ತನಗೆ ಪ್ರತ್ಯಕ್ಷನಾಗಿರದ ಅಶರೀರಿಯಾದ) ರಾಮನಾಥನನ್ನು ಕುರಿತು ಈ ವಚನದಲ್ಲಿ ಹೇಳ್ತಿರೋದು ಹೀಗಿದೆ :
"ನೀನೊಬ್ಬ ಶರೀರಿ. (ಆದ್ದರಿಂದ) ನಿನಗೆ ಹಸಿವಾಗುತ್ತದೆ (ಅಂದರೆ ಅನೇಕ ರೀತಿಯ ಹಸಿವು ನೀರಡಿಕೆಗಳ ಬಾಧೆಗಳಿಗೆ ಒಳಗಾಗುತ್ತೀಯೆ). (ಶರೀರಿಯಾದ್ದರಿಂದ) ನೀನು ಸುಳ್ಳ - ಎಂದು ನೀನು ನನ್ನನ್ನುದ್ದೇಶಿಸಿ ಜರಿದು ಮಾತಾಡಬೇಡ ರಾಮನಾಥ. (ಒಮ್ಮೆ) ನೀನೂ ನನ್ನಂತೆ (ಈ ಲೋಕದಲ್ಲಿ) ಶರೀರಿಯಾಗಿ (ಹುಟ್ಟಿ) ನೋಡು. (ಆಗ ನಿನಗೇ ಗೊತ್ತಾಗುತ್ತದೆ ಅಂದರೆ ಇವೆಲ್ಲ ಯಾಕೆ ಎಂದು ನೀನೇ ಅನುಭವಿಸುವುದರಿಂದ ಆಗ ನಿನಗೆ ನನ್ನನ್ನು ಜರಿಯಬಾರದು ಎಂದು ತಿಳಿಯುತ್ತದೆ)". | ಒಡಲು ಎಂದರೆ ದೇಹ. ದೇಹ ಪಡೆದ ಮೇಲೆ ಹಸಿವು ಆಗಲೇಬೇಕು. ಇದು ದೇಹದ ಮಿತಿ. ಹುಸಿವ ಎಂದರೆ ಅಗತ್ಯವಾದಲ್ಲಿ ಸುಳ್ಳು ಹೇಳುವುದು ಮಾನವ ಮನಸ್ಸಿನ ಮಿತಿ. ಹೀಗೆಂದು ಹಳಿಯಬೇಡ ರಾಮನಾಥ! ನನ್ನ ಹಾಗೆ ದೇಹ ಹೊತ್ತು ಅನುಭವಿಸಿ ನೋಡು ಬದುಕಿನ ಸಂಕಷ್ಟಗಳನ್ನು! ಆ ನಂತರ ಬೇಕಿದ್ದರೆ ನನ್ನನ್ನು ಹೀಯಾಳಿಸಿ ಥಳಿಸು |