Friday, November 10, 2023

ಭಾರತೀಯಮ್


ಭಾರತೀಯಮ್

ಭಾರತೀಯವೆಂದರೇನು? 

ಈ ಭೂಮಿಯೆ? 
ನಿನ್ನ ಭಾಷೆಯೇ? 
ಚೆಂದದ ಭೂಷವೇ? 
ರುಚಿಕರ ಭೋಜ್ಯವೇ? 
ನಗುನಗುವ ಬಣ್ಣಬಣ್ಣದ ಮೆರವಣಿಗೆಯೇ? 

ನೀ ಹುಟ್ಟಿರುವುದಿಲ್ಲೋ? 
ನಿನ್ನ ಹೊಟ್ಟು ಇರುವುದಿಲ್ಲೋ?
ಆ ಹೆಚ್ಚುಗಾರಿಕೆ ಇರುವುದಿಲ್ಲೋ? 
ಅತಿ ಹಮ್ಮೆಗೆ ಬಡಿವ ಡಂಗುರವೋ? 
ಭಾರತೀಯನೇ! 
ಇದೆಲ್ಲಾ ಸತ್ಯ. 
ಮತ್ತೆ ಇದರ ಮೇಲೂ ಇದೆ!!! 

ಭಾರತೀಯನೆಂದರೆ ನೀ-
ಭಾರತೀ ನಿನ್ನ ಭಾಗ್ಯದೇವತೆ! 
ಸಂಸ್ಕೃತಿಯ ಋಣಿ ನೀ 
ವನಸಿರಿಯ  ಧನಿ ನೀ
ಕೃಷ್ಣಸಾರಿದ 
ಧರ್ಮಮಾರ್ಗದಿ
ನಡೆದು ಮುಕ್ತಿಯ ಪಡೆವೆ ನೀ 
ಭಾರತೀಯನೂ, 
ವಿಶ್ವಮಿತ್ರನೂ, 
ಕೃತಕೃತ್ಯನೂ, 
ಧನ್ಯ ನೀ! 

🙏🙏🙏