Tuesday, October 28, 2014

Milind Nayak's Painting






ನೀರ ಹನಿಯು ನಡುಗಿ ನಿಲಲು
ಹೂವು ಅದನು ಕಂಡು ನಗಲು
ತಂಪು ಗಾಳಿ ಬೀಸುತಿರಲು
ಮಂದ ರವಿಯ ಬೆಳಕು ಬರಲು
ಕುಂಚದಿಂದ ಮೂಡಿಬಂದ ಈ ಚೆಲುವ
ಮನವ ಸೆಳೆವ ಮಕರಂದ ತರುವ
ಚಿತ್ರ ದೇವರದೊ ಕಲೆಗಾರನದೋ
ಮನವ ಮರೆವ ಆಟವದೋ ಸೃಷ್ಟಿಯ ನಿರಂತರ ನಾಟ್ಯವದೊ?