Monday, May 28, 2012

Hare Krishna - a Double Treat




ತಪ್ಪದೇ ಲಾಲ್ಬಾಗ್ಲಿ ಕಾಲ ಹರಿಸುತ್ತಾ
ಪ್ರತಿ ಭಾನುವಾರ ಮೈ ಕರಗಿಸೋ ಪ್ರಯುಕ್ತ
ನಂತರ ಹೊರಟೆನು ದೋಸೆ ಮನೆಯತ್ತ
ಹೊಟ್ಟೆ ಪೂಜೆಗೆ ನಿಂತ ನಾ ಮಹಾಭಕ್ತ.

ನೂರಕ್ಕೂ ಮೀರಿರೋ ದೋಸೆಯಾ ಪಟ್ಟಿ.
ಅದಕೆ ಸೇರಿದ ಹಾಗೆ ಚಾಟ್ಗಳಾ ಬುಟ್ಟಿ.
ತಿಂಡಿಗೆ ತಿನಿಸಿಗೆ ಇಲ್ಲಿ ಏನೂ ಕೊರೆ ಇಲ್ಲ.
ಜೇಬಿಗೆ ಕತ್ತರಿ ಬೀಳುವುದೂ ಇಲ್ಲ.

ವಾರದಲಿ ಪಟ್ಟ ಆ ಪಾಡಿಗೆಲ್ಲ ಫಲವು.
ಖಾಲಿ ದೋಸೆಯ ರುಚಿಯೇ ಮಾನವನ ನಲಿವು.
ಈ ನನ್ನ ರಗಳೆ ಒಂದು ಹರೇ ಕೃಷ್ಣ ಮಂತ್ರ.
ಹರಿ ಪ್ರದಕ್ಷಿಣೆ ಮೊದಲು ಪ್ರಸಾದ ನಂತ್ರ.

- Posted using BlogPress from my iPad