ಇಂದು ಐರಾವತಗೆ ನಮಿಸುವ ದಿನ.
ಜಂಬೂ ಸವಾರಿಯಲಿ ಚಿನ್ನದಂಬಾರಿಯಲಿ
ಚಾಮುಂಡಿಯ ಪಯಣ
ನೆನೆಯುವ
ದಿನ.
ರಾಜ ವೈಖರಿಯಲ್ಲಿ, ಗತ್ತಿನಲಿ, ಮತ್ತಿನಲಿ, ಗಂಭೀರ ಚಲನೆಯ
ಚಿತ್ರಿಸುವ ದಿನ.
ಹಿಂಡು ಹಿಂಡಾಗಿ
ಒಲವಿನಲಿ ಒಡನಾಡಿ ಮರಿಯಾನೆಯನು ಕಾಯ್ವ
ತಾಯಿಯ ದಿನ.
ನೀರಿನಾಟವನಾಡಿ ಮಣ್ಣನ್ನು ಮೈಮೇಲೆ ಎರಚಿಕೊಂಡಾಡುವ ಆನೆಮರಿಯ ದಿನ.
ಬಿದಿರ ಧ್ವಂಸವ ಮಾಡಿ
ಅರಸರಸಿ ಹಲಸುಂಡು
ಸಂತೋಷದಿ ಘೀಳಿಡುವ ರಾಜಾನೆಯ ದಿನ.
World Elephant Day!