I got this very creative piece:
ಓಹ್ ಬರೀ ಈರುಳ್ಳಿ ಇದ್ಯಾ
ಒಂದ್ ಉಪ್ಪಿಟ್ಟು ಮಾಡಿಬಿಡೋಣ
ಓಹ್ ಬಟಾಣಿ ಬಂದಿದೆ fresh ಆಗಿ
ಚೆನ್ನಾಗ್ ಒಂದ್ ಉಪ್ಪಿಟ್ಟು ಮಾಡೋಣ
ಅವರೆಕಾಳು ಸೀಸನ್ನು
ಸೊನೆ ಕಾಳು ಹಾಕಿ ಒಂದೊಳ್ಳೆ ಉಪ್ಪಿಟ್ಟು ಮಾಡೋಣ
ಇಷ್ಟೆಲ್ಲ ತರಕಾರಿ ಇದೆ ಮನೇಲಿ
ಎಲ್ಲ ಹಾಕಿ ಒಂದ್ ಉಪ್ಪಿಟ್ಟು ಮಾಡಿಬಿಡೋಣ
ಅಯ್ಯೋ ಒಂದೂ ತರಕಾರೀನೆ ಇಲ್ವಲ್ಲ
ಇಂಗು ತೆಂಗು ಹಾಕಿ ಉಪ್ಪಿಟ್ಟು ಮಾಡಿಬಿಡೋಣ
ಓಹ್ ಏಕಾದ್ಸಿ
ಸಿಂಪಲ್ ಆಗೊಂದ್ ಉಪ್ಪಿಟ್ಟು ಮಾಡಿಬಿಡೋಣ
ಗಂಡಿನ ಕಡೇವ್ರು ಬರ್ತಿದಾರೆ
ಕಾಫಿ ಜೊತೆಗೊಂದ್ ಉಪ್ಪಿಟ್ಟು ಮಾಡಿಬಿಡೋಣ
ಮನೇಲಿ ಶ್ರಾದ್ಧ
ರಾತ್ರಿ ಫಳಾರಕ್ಕೆ ಉಪ್ಪಿಟ್ಟು ಮಾಡಿಬಿಡೋಣ
15 ಜನ ನೆಂಟರು ಬರ್ತಿದಾರೆ
ಟಿಫನ್ ಗೆ ಉಪ್ಪಿಟ್ಟು ಮಾಡಿಸಿಬಿಡೋಣ
ಮನೆವ್ರು ಶುಗರ್ ಟೆಸ್ಟ್ ಗೆ ಹೋಗಿದ್ದಾರೆ
ಬೇಗ ಒಂದ್ ಉಪ್ಪಿಟ್ಟು ಮಾಡಿಬಿಡೋಣ
ಅಡುಗೆ ಅಂತೇನು ಜಾಸ್ತಿ ಬರಲ್ಲ
ಸಮಯ ಅಂದ್ರೆ ಒಂದುಪ್ಪಿಟ್ ಮಾಡ್ಕೊಳಕ್ಕೆ ಬರತ್ತೆ
ರವೆ ಹುರಿದು ಒಗ್ಗರಣೆ ಹಾಕ್ಕೊಡ್ತೀನೋ
ಬೇಕಾದಾಗ ಬಿಸಿನೀರಿಗ್ ಹಾಕಿ ಒಂದುಪ್ಪಿಟ್ ಮಾಡ್ಕೊಬೋದು
ಯಾಕೋ ಮೂಡಿಲ್ಲ.. ಸುಸ್ತು...
ಒಂದುಪ್ಪಿಟ್ಟು ಮಾಡಿಬಿಡೋಣ
ಡಾಕ್ಟ್ರು ರೈಸ್ ಬೇಡ ಅಂದಿದ್ದಾರೆ
ರಾತ್ರಿಗೆ ಉಪ್ಪಿಟ್ಟು ಮಾಡಿಬಿಡೋಣ
ಬೇಗ ಜೀರ್ಣ ಆಗುತ್ತೆ
ಉಪ್ಪಿಟ್ಟು ಮಾಡಿಬಿಡೋಣ
ಹೊಟ್ಟೆಗೆ ಡಿಂಡಾಗಿ ಇರುತ್ತೆ
ಪ್ರಯಾಣಕ್ಕೆ ಉಪ್ಪಿಟ್ಟು ಮಾಡಿಬಿಡೋಣ
ಉಫ್.. ಎಂಥಾ all rounder ನೋಡ್ರೀ ನಮ್ ಉಪ್ಪಿಟ್ಟು .. 🥰🥰
ಕುಡುಕರು ಸುಖಕ್ಕೆ ದುಃಖಕ್ಕೆ ಎಲ್ಲದಕ್ಕೂ ಹೆಂಡದ ಮೊರೆ ಹೋಗ್ತಾರಲ್ಲ ಹಾಗೇ ಇದು 😁😁😁
(ಧರ್ಮಶ್ರೀ ಅಯ್ಯಂಗಾರ್ ರವರ ಫೇಸ್‌ಬುಕ್ ಪೋಸ್ಟ್)
***
I have added my 2 cents here:
ಸರ್ವಪಾಕಶಾಸ್ತ್ರದಲ್ಲಿ ಕಡೇ ಮಾತೆ ನಮ್ಮ ಉಪ್ಪಿಟ್ಟು!
ಸರ್ವಜನಾಭಿರುಚಿಯೇ ನಮ್ಮ ಹೆಮ್ಮೆಯಾ ಈ ಉಪ್ಪಿಟ್ಟು.
ಲಘ್ವಾಹಾರಿ ಹೊಟ್ಟೆಬಾಕ ಎಲ್ಲರಿಗೂ ಈ ಉಪ್ಪಿಟ್ಟು.
ಬ್ರಹ್ಮದಾ ಪ್ರತೀಕವಿದು ಸರ್ವವ್ಯಾಪಿ ಉಪ್ಪಿಟ್ಟು!
ಚಟ್ನಿ ಸಾಂಬಾರ್ ಗೊಜ್ಜು ಮಿಡಿ
ಸಿಹಿಜೊತೆಯೂ ಉಪ್ಪಿಟ್ಟು
ಎಣ್ಣೆ ತುಪ್ಪ ಬೆಣ್ಣೆ ಮೊಸರು
ಏನಿದ್ರೂ ಸಾಕು, ಉಪ್ಪಿಟ್ಟು
ಬೆಳಿಗ್ಗೆ ರಾತ್ರಿ ಊಟ ತಿಂಡಿ
ಭರ್ಜರಿ ಭೋಜ್ಯ ಉಪ್ಪಿಟ್ಟು
ಸ್ವರ್ಗದಿ ಸಹ ನಿತ್ಯ ಖಾದ್ಯ ನಮ್ಮೂರ ಮಹಿಮೆಯ ಉಪ್ಪಿಟ್ಟು!
Jai Upma! Or, better still, Uppittu!