Tuesday, April 17, 2012

Rasaanubhava - ಬೀದಿ ಹೂವು



ಬೀದಿ ಹೂವು
ಹಳೆ ಊರ ಮುಖವನೆ ಮರೆಸಿ ಭೂಮಿಯಲಿ ಮಳೆ ಹೊಡೆದು
ಮನೆ ಎಂದು ಹೆಸರಿಟ್ಟು ಕನಸ ಲಿಫ್ತಲಿ ನನ್ನ ಹತ್ತಿಸಿದೆ.
ನಾನೊಬ್ಬ ಬೆಪ್ಪಣ್ಣ ಈ ಊರಿನಲ್ಲಿ ಬಾವುಲಿಯಂತೆ ಜೋತು ಬಿದ್ದೆ.

ಈ ತೋಲಾಟದಲ್ಲಿ ಏನು ರಸಾನುಭವ?
ಈ ಜಂಜಾಟದಲ್ಲಿ ಏನು ಹೂವಿನಾಸ್ವಾದ?
ಮಲ್ಲಿಗೆಯ ಮಾಧುರ್ಯವೆಲ್ಲಾ ಬರೀ ಒಂದು ಸ್ಕ್ರೀನ್ ಸೇವರ ಚಿತ್ರ.
ಚಂಪಕದ ಕಂಪು ಬರೀ ಒಂದು ಅಗರಬತ್ತಿಯ ಧೂಪವಷ್ಟೇ.

ಹೀಗಿರುವಾಗ.

ಅಚ್ಚರಿ! ಅಚ್ಚರಿ!
ಇಂಥಾ ಬರಡು ಜೀವನದಲ್ಲೂ
ವಿಧಾತನ ಕೈವಾಡ.
ರಸ್ತೆಯಲ್ಲೇ ರಸಾನುಭವ.
ಹೂವಿನ ಹಸಿ ಹಸಿ ನಗೆ.
ಅಲ್ಲೇ ಮೊಬೈಲ್ ಫೋಟೋ.
ಅದನ್ನೇ ವರ್ಣಿಸಿ ಬರೆದ ಕವಿತೆ.


ಎಂಥಾ ರಸ ಮಿಂಚಿನ ಅನುಭವ.
ಎಂಥಾ ಚಿಂತನ.
ಎಂಥಾ ಸಿಂಚನ.

- Posted using BlogPress from my iPhone